ಆ ಅಪ್ಪ ನಾನು ಸತ್ತಿದ್ದಾನೆ ಅಂದುಕೊಂಡಿದ್ದ ಅಪ್ಪನಂತಿರಲಿಲ್ಲ!

ಯೋಸಾ ತನ್ನ ತಾಯಿಯೊಂದಿಗೆ

ಮಾರಿಯಾ ವರ್ಗಾಸ್ ಲೋಸಾನ ಹೆಸರನ್ನು ಯೋಸಾ ಎಂದು ಬರೆಯಬೇಕಂತೆ. ಇದನ್ನು ಬರೆಯುವ ಹೊತ್ತಿಗೆ ನನಗೆ ಅದು ಅರ್ಧಂಬರ್ಧ ಗೊತ್ತಿತ್ತು. ಯೋಸಾ ಎಂದು ಬರೆಯಲು ಧೈರ್ಯ ಸಾಲದೆ ಲೋಸಾ ಎಂದೇ ಬರೆದೆ. ಇದು ಅವನ ಆತ್ಮಕಥೆಯಾದ ಫಿಶ್ ಇನ್ ದ ವಾಟರ್ ನಿಂದ ಆಯ್ದ ಭಾಗಗಳ ಸಂಗ್ರಹ. ತನ್ನ ಅಪ್ಪನನ್ನು ಭೇಟಿಯಾಗಲು ಹೋಗುವ ಬಾಲ್ಯದ ಘಟನೆಯನ್ನು ವರ್ತಮಾನದೊಳಗೆ ಬೆರೆಸಿ ಒಂದು ದೊಡ್ಡ ಅಧ್ಯಾಯವನ್ನೇ ಯೋಸಾ ಬರೆದಿದ್ದಾನೆ. ಅದರಿಂದ ಕೆಲವು ಭಾಗಗಳನ್ನಷ್ಟೇ ಎತ್ತಿಕೊಂಡು ಇದನ್ನು ರೂಪಿಸಿದೆ. ಯೋಸಾಗೆ ನೊಬೆಲ್ ಪ್ರಶಸ್ತಿ ಬಂದಾಗ  ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ಸಂಪಾದಕ ರಘುನಾಥ್ ಚ.ಹ ಕೊಟ್ಟ ಅಸೈನ್‌ಮೆಂಟ್‍ನ ಭಾಗವಾಗಿ ಇದನ್ನು ಬರೆಯಬೇಕಾಯಿತು. ಇದು ಪುರವಣಿಯಲ್ಲಿ ಪ್ರಕಟವೂ ಆಯಿತು.

ಅವು 1946ರ ಕೊನೆಯ ದಿನಗಳು ಹಾಗೆಯೇ 1947ರ ಆರಂಭದ ದಿನಗಳು. ಆದರೆ ಸಲೇಶಿಯನ್ ಶಾಲೆಯ ಪರೀಕ್ಷೆಗಳು ಮುಗಿದಿದ್ದವು. ನನ್ನ ಐದನೇ ಗ್ರೇಡ್ ಮುಗಿಸಿಕೊಂಡಿದ್ದೆ. ಬೆಳ್ಳಗಿನ ಬೆಳಕು ಮತ್ತು ಸುಡುವ ಬಿಸಿಯೊಂದಿಗೆ ಪಿಯೂರಕ್ಕೆ ಬೇಸಿಗೆ ಬಂದಿತ್ತು.

ಅಮ್ಮ ತನ್ನ ನಡುಗದ ಧ್ವನಿಯಲ್ಲಿ ‘ನಿನಗೀಗಾಗಲೇ ಇದು ಗೊತ್ತು… ಅಲ್ವಾ?’ ಎಂದಳು.
‘ಏನು ಗೊತ್ತಿರೋದು?’
‘ನಿಮ್ಮಪ್ಪ ಸತ್ತಿಲ್ಲ ಅನ್ನೋದು ನಿನಗೆ ಗೊತ್ತಲ್ವಾ…?’
‘ಹೌದು… ಹೌದು…’
ಆದರೆ ನನಗದು ಗೊತ್ತಿರಲಿಲ್ಲ. ನನಗೆ ಅಂಥದ್ದೊಂದು ಸಣ್ಣ ಅನುಮಾನವೂ ಇರಲಿಲ್ಲ. ನನ್ನಪ್ಪ ಇನ್ನೂ ಬದುಕಿದ್ದಾನಾ? ಇಷ್ಟು ವರ್ಷ ಅವನು ಸತ್ತಿದ್ದಾನೆ ಅಂತ ನಾನಂದುಕೊಂಡಿದ್ದಾಗ ಅವನೆಲ್ಲಿದ್ದ? Continue reading

Posted in ಅನುವಾದಗಳು | Tagged , | 2 Comments

ಒಂದೂವರೆ ವರ್ಷಗಳ ನಂತರ ಮತ್ತೆ…

ಹತ್ತಿರ ಹತ್ತಿರ ಒಂದೂವರೆ ವರ್ಷಗಳ ನಂತರ ಮತ್ತೊಂದು ಬ್ಲಾಗ್ ಪೋಸ್ಟ್ ಬರೆಯುತ್ತಿದ್ದೇನೆ. ಯಾಕೆ ಇಷ್ಟು ಕಾಲ ಬರೆಯಲಿಲ್ಲ ಎಂದು ಯಾರಾದರೂ ಕೇಳಿದರೆ ಹಲವು ಉತ್ತರ ಹೇಳಬಹುದು. ಅವೆಲ್ಲವೂ ನನ್ನ ಸೋಮಾರಿತನಕ್ಕೆ ಮಾಡುವ ಸಮರ್ಥನೆಗಳಾಗಿಬಿಡುತ್ತವಲ್ಲಾ ಎಂಬ ಭಯ ನನ್ನದು. ಹಾಗಾಗಿ ಯಾವ ಕಾರಣಗಳನ್ನೂ ಹೇಳುವುದಿಲ್ಲ. ಇನ್ನು ಮುಂದೆ ನಿಯತವಾಗಿ ಬ್ಲಾಗ್ ಬರೆಯಬೇಕೆಂಬ ತೀರ್ಮಾನವನ್ನಂತೂ ಮಾಡಿದ್ದೇನೆ. Continue reading

Posted in ಟಿಪ್ಪಣಿ | Tagged , , , , | Leave a comment

ಉನ್ನತ ಶಿಕ್ಷಣ: ಸುಧಾರಣೆಗೆ ಮಂತ್ರದಂಡವಿಲ್ಲ

ಉನ್ನತ ಶಿಕ್ಷಣವೆಂದರೆ  ಜ್ಞಾನದ ಸೃಷ್ಟಿಗೆ ಬೇಕಾದ ತರಬೇತಿಯೇ, ಕೌಶಲ್ಯ ವೃದ್ಧಿಯೇ? ಈ ಪ್ರಶ್ನೆಗೆ ಭಾರತೀಯ ಸಂದರ್ಭದಲ್ಲಿ ಒಂದು ಸ್ಪಷ್ಟ ಉತ್ತರವಿಲ್ಲ. ಉನ್ನತ ಶಿಕ್ಷಣದ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಕೌಶಲ್ಯ ವೃದ್ಧಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿವೆ. ಮಾನವಿಕ ವಿಭಾಗಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇನ್ನೂ ಜೀವಂತವಾಗಿಟ್ಟುಕೊಂಡಿರುವ ಸಾಮಾನ್ಯ ಪದವಿ ವಿಷಯಗಳಲ್ಲಿ ಇತ್ತ ಕೌಶಲ್ಯ ವೃದ್ಧಿಗೆ ಬೇಕಾದ ಅಂಶಗಳೂ ಇಲ್ಲ. ಅತ್ತ ಜ್ಞಾನದ ಸೃಷ್ಟಿಗೆ ಅಗತ್ಯವಿರುವ ಮೂಲಭೂತ ಪಠ್ಯಗಳ ಕಲಿಕೆಯೂ ಇಲ್ಲ. Continue reading

Posted in ಟಿಪ್ಪಣಿ | 1 Comment

ಭಿನ್ನಮತದ ದ್ರವೀಕರಣ ಸಾಧ್ಯತೆಯು

ಯಡಿಯೂರಪ್ಪನವರದ್ದು ಹಲ ಬಗೆಯ ಸಾಧನೆ. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂಥ ನಾಯಕತ್ವ ನೀಡಿದ್ದು ಅವರ ಮೊದಲ ಸಾಧನೆ. ವಿವಿಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆಳೆದುಕೊಂಡು ಬಂದು ಉಪ ಚುನಾವಣೆಗೆ ಕಾರಣರಾಗಿ ಆ ಸ್ಥಾನಗಳಲ್ಲಿ ಹೆಚ್ಚಿನವನ್ನು ಗೆದ್ದುಕೊಂಡದ್ದೂ ಯಡಿಯೂರಪ್ಪ ನವರ ಸಾಧನೆಯೇ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟದ್ದೂ ಅವರ ಮತ್ತೊಂದು ಸಾಧನೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸರ್ಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲೇ ಭಿನ್ನಮತದ ಉದ್ಘಾಟನೆ. ಭಿನ್ನಮತವೆಂಬುದು ಎಲ್ಲಾ ಸರ್ಕಾರಗಳಲ್ಲೂ ಇತ್ತು. ಆದರೆ ಇದು ಆರಂಭವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳ ಅವಧಿಯಾದರೂ ಬೇಕಿತ್ತು. ಯಡಿಯೂರಪ್ಪನವರ ಸರ್ಕಾರ ಈ ವಿಷಯದಲ್ಲೂ ಮುಂದಿದೆ! Continue reading

Posted in ಒಂಟಿದನಿ (ಉದಯವಾಣಿ ಅಂಕಣ) | 2 Comments

ಉತ್ತಮ ಆಡಳಿತವೆಂಬ ಚುನಾವಣಾ ವಿಷಯ

ಭಾರತದ ಚುನಾವಣಾ ಇತಿಹಾಸದಲ್ಲಿ ಎರಡು ಪ್ರಮುಖ ಘೋಷಣೆ ಗಳಿವೆ. ಒಂದು ಇಂದಿರಾ ಗಾಂಧಿಯವರ ಕಾಲದ `ಗರೀಬಿ ಹಟಾವೋ’ ಮತ್ತೊಂದು ವಾಜಪೇಯಿ ಆಡಳಿತಾವಧಿಯನ್ನು ಗಮನದಲ್ಲಿಟ್ಟು ಕೊಂಡು ರೂಪಿಸಿದ `ಭಾರತ ಪ್ರಕಾಶಿಸುತ್ತಿದೆ’. ಈ ಎರಡೂ ಘೋಷಣೆ ಗಳ ಮಧ್ಯೆ ಮೂರು ದಶಕಗಳ ಅಂತರವಿದೆ. ಗರೀಬಿ ಹಟಾವೋ ಒಂದು ಕಾಲಘಟ್ಟದ ಭಾರತದ ಮನೋಭೂಮಿಕೆಯನ್ನು ಹೇಗೆ ವಶಪಡಿಸಿ ಕೊಂಡಿತೆಂದರೆ ಅವನತಿಯಂಚಿನಲ್ಲಿದ್ದ ಕಾಂಗ್ರೆಸ್‌ಗೆ ಮರುಜೀವ ದೊರೆಯಿತು. ಇಡೀ ಭಾರತದ ಮನೋಭೂಮಿಕೆಯನ್ನು ಹಿಡಿದಿಡುವ ಇಂಥದ್ದೊಂದು ಘೋಷಣೆಯನ್ನು ನೀಡುವುದಕ್ಕೆ ಈ ತನಕ ಯಾರಿಗೂ ಸಾಧ್ಯವಾಗಲಿಲ್ಲ. Continue reading

Posted in ಒಂಟಿದನಿ (ಉದಯವಾಣಿ ಅಂಕಣ) | 2 Comments